ರಾಮಾಯಣ ಕಥೆಗಳು

ಪುತ್ರ ವಿರಹದಿಂದ ದಶರಥನ ಮರಣ ದಶರಥ ಮಹಾರಾಜ ಅಯೋಧ್ಯೆಯ ಒಡೆಯ. ಅವನಿಗೆ ಕೌಶಲ್ಯ ಸುಮಿತ್ರೆ ಮತ್ತು ಕೈಕೇಯಿ ಎಂದು ಮೂರು ಜನ ಹೆಂಡಿರು. ಅವನಿಗೆ ಎಷ್ಟು ದಿವಸವಾದರೂ ಮಕ್ಕಳಾಗಲಿಲ್ಲ. ಅವನು ಒಂದು ಸಾರಿ ಕಾಡಿಗೆ ಹೋಗಿದ್ದ. ಅಲ್ಲಿ ಬಾವಿಯಲ್ಲಿ ಗುಳುಗುಳು ಶಬ್ದವಾಯಿತು. ಶಬ್ದವೇದಿ ಬಾಣ ಬಿಡುವುದರಲ್ಲಿ ನಿಷ್ಣಾತ. ಆ ಶಬ್ದವು ಯಾವುದೋ ಒಂದು ಪ್ರಾಣಿ ನೀರು ಕುಡಿಯುತ್ತಿರಬಹುದೆಂದು ತಿಳಿದು ಶಬ್ದವೇಧಿ ಬಾಣವನ್ನು ಬಿಟ್ಟ. ಅದು ನೇರವಾಗಿ ಬಾವಿಯಲ್ಲಿ ನೀರು ತುಂಬುತ್ತಿದ್ದ ಒಬ್ಬ ತಂದೆ ತಾಯಿ ಸೇವೆ ಮಾಡುತ್ತಿದ್ದ ಶ್ರವಣಕುಮಾರನಿಗೆ ಬಿತ್ತು. ವಯಸ್ಸಾದ ಕುರುಡರಾದ ತಂದೆ ತಾಯಿಯನ್ನು ಶ್ರವಣಕುಮಾರನು ಒಂದು ಕಂಬಿಯಲ್ಲಿ ಕೂರಿಸಿಕೊಂಡು ಹೊತ್ತುಕೊಂಡು ತೀರ್ಥಯಾತ್ರೆ ಮಾಡಿಸುತ್ತಿದ್ದ. ಬಾಯಾರಿಕೆ ಆಯಿತು. ನೀರು ತರಲು ಹತ್ತಿರವಿದ್ದ ಬಾವಿಗೆ ಹೋಗಿ ನೀರನ್ನು ತುಂಬುತ್ತಿರುವಾಗ ಗುಳುಗುಳು ಶಬ್ದವಾಯಿತು. ಯಾವುದೋ ಪ್ರಾಣಿ ನೀರು ಕುಡಿಯಲು ಬಂದಿರಬಹುದೆಂದು ದಶರಥ ಶಬ್ದವೇದಿ ಬಾಣ ಬಿಟ್ಟನು. ಆ ಬಾಣಕ್ಕೆ ತುತ್ತಾಗಿ ಶ್ರವಣಕುಮಾರ ಸತ್ತುಹೋದ. ಅವನ ತಂದೆ ತಾಯಿಗೆ ನೀರು ತರಲು ಬಂದಿರುವ ಸಮಾಚಾರ ಹೇಳಿದ. ಆಗ ದಶರಥ ಬಹಳ ನೊಂದಿಕೊಂಡು ನೀರು ತೆಗೆದುಕೊಂಡು ಹೋಗಿ ಆ ವೃದ್ಧ ದಂಪತಿಗಳಿಗೆ ಕೊಟ್ಟ. ತಮ್ಮ ಮಗನೇ ಎಂದು ಅವರು ಭಾವಿಸಿದರು. ಆಗ ದಶರಥ, ಆದ ಅಚಾತುರ್ಯ ವಿಷಯ ಹೇಳಿದ. ಆಗ ಕೂಡಲೆ ಆ ವೃದ್ಧ ದಂಪತಿಗಳು ಈ ದಶರಥನಿಗೆ ಶಾಪ ಕೊಟ್ಟರು. ನಾವು ನಮ್ಮ ಪುತ್ರ ಶೋಕದ ದುಃಖದಲ್ಲಿ ದೇಹ ಬಿಡುತ್ತೇವೆ. ನೀವು ಸಹ ನಿಮ್ಮ ಪುತ್ರ ಶೋಕದ ದುಃಖದಲ್ಲಿ ದೇಹ ಬಿಡುವಂತಾಗಲಿ ಎಂದು ಶಾಪ ಕೊಟ್ಟರು. ಆಗ ದಶರಥ ಅವರ ದೇಹಗಳನ್ನು ದಹನ ಮಾಡಿ ಶಾಪವನ್ನು ಹೊತ್ತುಕೊಂಡು ಅಯೋಧೆsÀ್ಯ ಅರಮನೆಗೆ ಬಂದ. ಅವನಿಗೆ ಒಂದು ಸಂತೋಷವೆಂದರೆ ಆ ವೃದ್ಧ ದಂಪತಿಗಳ ಶಾಪ ನನಗೆ ವರವಾಯಿತು. ಏಕೆಂದರೆ ಈ ತರಹದಿಂದಲಾಗಲಿ ಮಕ್ಕಳಾಗುತ್ತವೆಯಲ್ಲಾ ಅಷ್ಟೆ ಸಂತೋಷ ಎಂದುಕೊಂಡ.
ದಶರಥನಿಗೆ ಶ್ರೀರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನ ಎಂಬ ಮಕ್ಕಳಾದರು. ಬಹಳ ಸಂತೋಷವಾಯಿತು. ಅವರಿಗೆ ಶಸ್ತ್ರ ವಿದ್ಯೆಯನ್ನು ಕಲಿಸಿದರು. ಯಜ್ಞಕ್ಕೆ ವಿಘ್ನ ಉಂಟು ಮಾಡುವ ಮಾರೀಚ ಸುಬಾಹುವನ್ನು ನಿಗ್ರಹಿಸಿದರು. ದಾರಿಯಲ್ಲಿ ಶಾಪಗ್ರಸ್ಥಳಾದ ಕಲ್ಲಾಗಿ ಬಿದ್ದ ಅಹಲ್ಯೆಯ ಶಾಪ ವಿಮೋಚನೆಗೊಳಿಸಿದರು. ಮಾರೀಚ, ಸುಬಾಹು ತಾಯಿಯಾದ ತಾಟಕಿಯನ್ನು ಕೊಂದರು. ಜನಕ ರಾಜನ ಆಸ್ಥಾನಕ್ಕೆ ಹೋಗಿ ಶಿವಧನುಸ್ಸನ್ನು ಮುರಿದು ಸೀತೆಯನ್ನು ಶ್ರೀರಾಮ ವಿವಾಹವಾದನು. ಹಾಗೆಯೇ ಜನಕನು ತನ್ನ ಸ್ವಂತ ಮಗಳಾದ ಊರ್ಮಿಳೆಯನ್ನು ಲಕ್ಷ್ಮಣನಿಗೆ ಕೊಟ್ಟು ವಿವಾಹ ಮಾಡಿದರು. ಅಯೋಧ್ಯೆಗೆ ಹೋದ ಮೇಲೆ ಶ್ರೀರಾಮನಿಗೆ ಪಟ್ಟ ಕಟ್ಟಬೇಕು ಎಂಬ ವಿಷಯದಲ್ಲಿ ತನ್ನ ಕಿರಿಯ ಹೆಂಡತಿ ಕೈಕೇಯ ಹಟದಿಂದ ದಶರಥನು ಮರಣ ಹೊಂದಿದನು. ಋಷಿಯ ಶಾಪ ಸತ್ಯವಾಗಬೇಕಲ್ಲವೇ? ಆದ್ದರಿಂದ ಯಾರಿಗೂ ಯಾವ ರೀತಿಯಿಂದಲೂ ನೋವಾಗದಂತೆ ಜೀವನದಲ್ಲಿ ಬಾಳಿರಿ. ನಿಮ್ಮ ಉತ್ತಮವಾದ ಬಾಳಿಗೆ ಬಹಳ ಬೆಲೆ ಇದೆ.

cheap air max|cheap air jordans|pompy wtryskowe|cheap nike shoes| bombas inyeccion|cheap jordans|cheap jordan shoes|wholesale jordans|cheap jordan shoes|cheap dunk shoes|cheap jordans|wholesale jewelry china|cheap nike shoes|wholesale jordanscheap wholesale jordans|cheap wholesale nike|cheap wholesale jerseys