ಮಹಾಭಾರತ ಕಥೆಗಳು

ಏಕಲವ್ಯನ ಗುರುಭಕ್ತಿ ವಿಂಧ್ಯಪರ್ವತದ ಅರಣ್ಯದಲ್ಲಿ ಭಿಲ್ಲರ ಒಂದು ಜಾತಿಯ ಜನ. ಸಮಾಜದ ದೃಷ್ಟಿಯಲ್ಲಿ ನಿಕೃಷ್ಟರು. ಆದರೆ ನೀತಿಯ ದೃಷ್ಟಿಯಲ್ಲಿ ಉತ್ಕøಷ್ಟರು. ಇವರನ್ನು ನಿಷಧರು ಎಂದೂ ಕರೆಯುತ್ತಿದ್ದರು. ಹಿರಣ್ಯಧನು ಎಂಬುವವನು ಇವರ ನಾಯಕ. ಬಿಲ್ಲುವಿದ್ಯೆಯಲ್ಲಿ ಈ ಜನರು ಅಲ್ಪಸ್ವಲ್ಪ ಪರಿಚಿತರು. ಬಾಣಗಳ ಪ್ರಯೋಗದಿಂದ ಪ್ರಾಣಿಗಳನ್ನು ಬೇಟೆ ಆಡಿ, ಆಹಾರದ ಕೊರತೆಯನ್ನು ನೀಗಿಸಿಕೊಳ್ಳುತ್ತಿದ್ದರು. ಕೆಲವರು ದನಕರುಗಳನ್ನೂ ಸಾಕಿಕೊಂಡಿದ್ದರು. ವ್ಯವಸಾಯವನ್ನೂ ಹಲವು ಮಂದಿ ಮಾಡುತ್ತಿದ್ದರು. ಕಾಡಿನಲ್ಲಿದ್ದುದರಿಂದ ಕಾಡುಪ್ರಾಣಿಗಳು ಸಾಧುಪ್ರಾಣಿಗಳ ಮೇಲೆ ಆಕ್ರಮಣ ಮಾಡುತ್ತಿದ್ದುದೂ ಉಂಟು. ಅವುಗಳನ್ನು ಸಂಹರಿಸಲು ಸರಿಯಾದ ಅಸ್ತ್ರ-ಶಸ್ತ್ರ ಶಿಕ್ಷಣವನ್ನು ಯಾರೂ ಪಡೆದಿರಲಿಲ್ಲ. ಪಡೆಯುವ ಗೋಜಿಗೂ ಯಾರೂ ಹೋಗುತ್ತಿರಲಿಲ್ಲ. ಎಲ್ಲರೂ ಒಂದು ರೀತಿಯಲ್ಲಿ ಅನಾಗರಿಕರೇ.

ಏಕಲವ್ಯ ಹಿರಣ್ಯಧನುವಿನ ಒಬ್ಬನೇ ಮಗ. ಇನ್ನೂ ಎಂಟು ಹತ್ತು ವರ್ಷದ ಹುಡುಗ. ಉನ್ನತ ಕುಲದವರಂತೆ ತಾನೂ ವಿದ್ಯೆ ಕಲಿಯಬೇಕು. ವಿದ್ಯಾವಂತನೆನಿಸಬೇಕು ಎಂಬ ಆಸೆ-ಆಕಾಂಕ್ಷೆ ಅತಿ ಆಗಿತ್ತು. ಕಲಿಸುವ ಗುರುವಿಗಾಗಿ ಹುಡುಕಾಡುತ್ತಿದ್ದ. ಹಿರಣ್ಯಧನುವಿನಿಂದ ದ್ರೋಣಾಚಾರ್ಯರ ಹೆಸರನ್ನು ಕೇಳಿದ್ದ. ಆದರೆ ಅವರು ತಮ್ಮನ್ನು ಕೀÀಳುಜನರೆಂದು ಅಸಡ್ಡೆ ಮಾಡುವರೆಂಬುದನ್ನೂ ಅರಿತು ಪಾಂಡವ-ಕೌರವರಿಗೆ ಶಸ್ತ್ರ ವಿದ್ಯೆಯನ್ನು ಹೇಳಿಕೊಡುವ ಜಾಗದಲ್ಲಿ ಗುಟ್ಟಾಗಿ ಮರದ ಮೇಲೆ ಕುಳಿತುಕೊಂಡು ತದೇಕ ಚಿತ್ತದಿಂದ ಬಿಲ್ಲು, ಬಾಣ ವಿದ್ಯೆಯನ್ನು ಕಲಿತ. ಒಂದು ಸಾರಿ ಅರ್ಜುನ ಕಾಡಿನಲ್ಲಿ ಒಬ್ಬ ಅಪ್ರತಿಮ ವೀರನನ್ನು ಕಂಡು ಆಶ್ಚರ್ಯಭರಿತನಾದ. ಅರ್ಜುನ ಪ್ರಶ್ನಿಸಿದ - “ಬಿಲ್ಲಕುಮಾರ, ನಿನ್ನ ಅದ್ಭುತ ಬಾಣಪ್ರಯೋಗ ನನ್ನನ್ನು ಬೆರಗುಗೊಳಿಸಿದೆ. ಇಂತಹ ಅದ್ಭುತ ವಿದ್ಯೆಯನ್ನು ಕಲಿಸಿಕೊಟ್ಟ ಗುರು ಆದರೂ ಯಾರು?”

ಏಕಲವ್ಯ ಮಣ್ಣಿನ ಮೂರ್ತಿಯೇ ಕಡೆ ಬೆರಳು ತೋರಿಸುತ್ತಾ ಹೇಳಿದ-”ಆ ಮೂತಿಯೇ ನನ್ನ ಗುರು” ಅರ್ಜುನನಿಗೆ ಏಕಲವ್ಯನ ಮಾತು ಕೇಳಿ, ಅವನ ಬಗ್ಗೆ ದ್ವೇಷ ಹೆಚ್ಚುವುದರ ಜೊತೆಗೆ ತನ್ನ ಗುರುಗಳಾದ ದ್ರೋಣರ ಬಗ್ಗೆಯೂ ಕ್ರೋಧ ಉಕ್ಕೇರಿತು. ಮನಸ್ಸಿನಲ್ಲಿಯೇ ಅಂದುಕೊಂಡ ಆಹಾ! ಎಂತಹ ಮೋಸ. ಮಹಾತ್ಮರೆನಿಸಿದವವರಲ್ಲಿಯೂ ಇಂತಹ ಮೋಸವಾ? ಅರ್ಜುನಾ, ನಿನ್ನನ್ನು ಪ್ರಪಂಚದಲ್ಲಿಯೇ ಒಬ್ಬ ಚತುರ ಚಾಪವಿದ್ಯಾ ವಿಶಾರದನನ್ನಾಗಿ ಮಾಡುತ್ತೇನೆ ಎಂದು ಹೊಗಳುತ್ತಿದ್ದವರು ಇಲ್ಲಿ, ಈ ಬೇಡರ ಹುಡುಗನಿಗೆ ನಮಗ್ಯಾರಿಗೂ ತಿಳಿಯುವಂತೆ ಕಲಿಸಿ, ನನಗಿಂತಲೂ ಬಾಣ ಬಾಣಪ್ರಯೋಗದಲ್ಲಿ ಅಪ್ರತಿಭನೆನಿಸುವಂತೆ ಮಾಡಿದ್ದಾರೆ!

ಅರ್ಜುನನಿಗೆ ಗುರುಗಳ ಮಾತು ಇನ್ನೂ ರೇಗಿಸಿತು. ಮಾತಾಡಲು ಕಂಠವೇ ಬಿಗಿದು ಬಂದಂತಾಯಿತು. ಆದರೂ ತಾನೇ ಸಮಾಧಾನ ತಂದುಕೊಂಡು, ನಡೆದಿರುವುದನ್ನು ಅಮೂಲಾಗ್ರವಾಗಿ ಅವರ ಮುಂದಿಟ್ಟ. ಅವರಿಗೆ ಈಗ ಗಾಬರಿಯೊಂದಿಗೆ ವಿಸ್ಮಯವೂ ಹೆಚ್ಚಿತು. ರಾಜಕುಮಾರರ ವಿನಃ ಅವರು ಬೇರೆ ಯಾರಿಗೂ ಇದುವರೆಗೂ ಧನುರ್ವಿದ್ಯೆಯನ್ನು ಕಲಿಸುವ ಗೋಜಿಗೆ ಹೋಗಿಲ್ಲ! ಆದರೆ ಅರ್ಜುನನ ಮಾತನ್ನು ಈಗ ತಳ್ಳಿ ಹಾಕುವಂತಿಲ್ಲ! ಅವರನ್ನೂ ಕರೆದುಕೊಂಡು ಕೂಡಲೇ ಕಾಡಿಗೆ ಬಂದರು. ರಾಜಕುಮಾರರೂ ಹಿಂಬಾಲಿಸಿದರು. ಎಲ್ಲರೂ ಏಕಲವ್ಯನಿದ್ದೆಡೆಗೆ ಬಂದು, ನಿಂತರು. ಏಕಲವ್ಯ ಗುರುಗಳನ್ನು ಗುರುತಿಸಿದ.. ಅವರ ಪಾದಗಳ ಮೇಲೆ ಭಕ್ತಿಯಿಂದ ಬಿದ್ದ. ಎರಡೂ ಕೈ ಜೋಡಿಸಿಕೊಂಡು ಹೇಳಿದ-”ಗುರುಗಳೇ, ಅಂದು ತಾವು ತಿಳಿಸಿದಂತೆ ನಾನೇ ಸ್ವಸಾಮಥ್ರ್ಯದ ಸಾಧನೆಯಿಂದ ನಿಮ್ಮ ಸ್ವರೂಪದ ಈ ಮಣ್ಣಿನ ಮೂರ್ತಿಯನ್ನೇ ಗುರುವನ್ನಾಗಿ ಭಾವಿಸಿ, ಇಷ್ಟೆಲ್ಲಾ ವಿದ್ಯೆ ಗಳಿಸಿದ್ದೇನೆ. ನಿಮ್ಮ ಮಾತನ್ನು ನಾನು ತಳ್ಳಿ ಹಾಕಿಲ್ಲ. ಶಿರಸಾ ವಹಿಸಿ ಅದರಂತೆ ನಡೆದುಕೊಂಡಿದ್ದೇನೆ. ಅನುಗ್ರಹಿಸಿ ಆಶೀರ್ವದಿಸಬೇಕು.”

ದ್ರೋಣರಿಗೆ ಆನಂದ-ಆಶ್ಚರ್ಯ ಎರಡೂ ಒಮ್ಮೆಲೇ ಆಯಿತು. ಅವರು ಅರ್ಜುನನ ಕಡೆ ನೋಡಿದರು. ಅವನ ಈಷ್ರ್ಯೆಯ ಕಣ್ಣುಗಳು ಗುರುಗಳ ಮುಖವನ್ನು ಸುಡುತ್ತಿದ್ದುವು. ಕೂಡಲೇ ಏಕಲವ್ಯನ ಮೈದಡವುತ್ತಾ ಹೇಳಿದರು - “ಏಕಲವ್ಯಾ, ನಿನ್ನ ಗುರುಭಕ್ತಿ ಹಾಗೂ ಪ್ರಯತ್ನ ಸಾಧನೆಯನ್ನು ನಾನು ಮನಸಾರೆ ಮೆಚ್ಚಿದ್ದೇನೆ. ನಿನ್ನಂತಹ ಶಿಷ್ಯನನ್ನು ಪಡೆದು, ನಿಜಕ್ಕೂ ನನ್ನ ಜನ್ಮ ಸಾರ್ಥಕ ಆಯಿತು. ಆದರೆ ಗುರುಕೃಪೆ ದೊರೆತಿದ್ದರೂ, ನೀನು ನನಗೆ ಗುರುದಕ್ಷಿಣೆಯನ್ನೇ ಕೊಟ್ಟಿಲ್ಲವಲ್ಲ?”

ಏಕಲವ್ಯ ಥಟ್ಟನೆ ಕೇಳಿದ - “ಹೇಳಿ ಗುರುಗಳೇ, ತಮಗೆ ಗುರುದಕ್ಷಿಣೆಯ ರೂಪದಲ್ಲಿ ನಾನು ಏನು ತಾನೇ ಕೊಡಲಿ?” “ನಿನ್ನನ್ನು ನಾನು ಏನನ್ನೂ ತಂದುಕೊಡಲು ಕೇಳುತ್ತಿಲ್ಲ, ಕೇವಲ ನಿನ್ನ ಬಲಗೈ ಹೆಬ್ಬೆರಳನ್ನು ಗುರುದಕ್ಷಿಣೆಯ ರೂಪದಲ್ಲಿ ಕೊಡಲಾರೆಯಾ?” ದ್ರೋಣರು ಉಪಾಯವಾಗಿ ಶಿಷ್ಯನ ಕೊರಳಿಗೆ ಉರುಳು ಹಾಕಿದರು. ಏಕಲವ್ಯ ಹಿಂಜರಿಯಲಿಲ್ಲ. ತನ್ನ ಮಣ್ಣಿನ ಮೂರ್ತಿಯ ಬಳಿಗೆ ಬಂದ. ಮೊಳಕಾಲೂರಿ ಅದರ ಮುಂದೆ ಕುಳಿತ. ತನ್ನ ಹೆಬ್ಬೆರಳನ್ನು ಅವರ ಪಾದಗಳ ಬಳಿ ಇಟ್ಟು, ಚೂಪಾದ ಬಾಣದ ಮೊನೆಯಿಂದ ಅದನ್ನು ಕತ್ತರಿಸಿ ಹಾಕಿದ. ಕತ್ತರಿಸಿದ ಬೆರಳನ್ನು ಗುರುಗಳ ಪಾದಗಳ ಬಳಿ ಭಕ್ತಿಯಿಂದ ಅರ್ಪಿಸಿದ. ದ್ರೋಣರ ಕಣ್ಣುಗಳಲ್ಲಿ ಕಣ್ಣೀರು ತೊಟ್ಟಿಕ್ಕತೊಡಗಿದುವು. ಮಣ್ಣಿನ ಮೂರ್ತಿ ದ್ರೋಣರ ಕುಕೃತ್ಯದ ಕಡೆ ನೋಡುತ್ತಾ ವ್ಯಂಗ್ಯವಾಗಿ ನಗತೊಡಗಿತು.

cheap air max|cheap air jordans|pompy wtryskowe|cheap nike shoes| bombas inyeccion|cheap jordans|cheap jordan shoes|wholesale jordans|cheap jordan shoes|cheap dunk shoes|cheap jordans|wholesale jewelry china|cheap nike shoes|wholesale jordanscheap wholesale jordans|cheap wholesale nike|cheap wholesale jerseys