ವೇದದಲ್ಲಿ ಕರ್ಮಕಾಂಡ 80%, ಉಪಾಸನ ಕಾಂಡ 16%, ಜ್ಞಾನ ಕಾಂಡ 4% ಇವೆ.ಈ ಜ್ಞಾನ ಕಾಂಡದಲ್ಲಿ ವೇದಾಂತ ವಿಷಯವನ್ನು ಹೇಳಲಾಗಿದೆ.ವೇದಾಂತ ಅಂದರೆ ವೇದಗಳ ಅಂತ್ಯದ ಭಾಗ ಅಂದರೆ ಇದರಲ್ಲಿ ಸಂಪೂರ್ಣವಾಗಿ ಜ್ಞಾನವೇ ತುಂಬಿದೆ, ಇವೆ ಉಪನಿಷತ್ತುಗಳು.ಈಗ ಬೋಧನೆಗೆ ಉಪಲಬ್ಧವಿರುವುದು 108 ಉಪನಿಷತ್ತುಗಳು ಮಾತ್ರ ಅದನ್ನು ಗೋರಖಪುರದ ಗೀತಾ ಪ್ರೆಸ್ ನವರು ಪ್ರಿಂಟ್ ಮಾಡಿಸಿದ್ದಾರೆ ಇದರಲ್ಲಿ ದಶೋಪನಿಷತ್ತಿಗಳಿಗೆ ಆದಿ ಶಂಕರಾಚಾರ್ಯರು ಭಾಷ್ಯವನ್ನು ಬರೆದಿದ್ದಾರೆ.ನಮ್ಮ ಶ್ರೀ ಶಂಕರಾನಂದಾಶ್ರಮದಲ್ಲಿ 12 ಉಪನಿಷತ್ತಿಗಳಿಗೆ ಭಾಷ್ಯವನ್ನು ನಮ್ಮ ಗುರುಗಳು ಬರೆದಿದ್ದಾರೆ. ಹನ್ನೆರಡು ಉಪನಿಷತ್ತಿನ ಸಾರ ಸಂಗ್ರಹವನ್ನು ಈ ಒಂದೇ ಗ್ರಂಥದಲ್ಲಿ ಕೊಡಲಾಗಿದೆ.ಈಶ, ಕೇನ, ಕಠ,ಪ್ರಶ್ನ, ಮುಂಡಕ, ಮಾಂಡೂಕ್ಯ, ಐತರೇಯ, ತೈತ್ರೀಯ, ಬೃಹದಾರಣ್ಯಕ, ಛಾಂದೋಗ್ಯ,ಕೈವಲ್ಯ,ಶ್ವೇತಾಶ್ವ ರ ಉಪನಿಷತ್ತುಗಳು.
ಪುಟಗಳು : 269 ಬೆಲೆ : 300 ರೂ.ಗಳು