ಅಧ್ಯಾತ್ಮ ವಿದ್ಯೆಯನ್ನು ಬೋಧಿಸುವ ಅನೇಕ ಶಾಸ್ತ್ರೀಯ ಗ್ರಂಥಗಳು ವೇದಾಂತದ ಬೋಧೆಯನ್ನು ಮಾಡಿದರೂ ಸಾಮಾನ್ಯ ಜನರಿಗೆ ಅದರ ತಾತ್ಪರ್ಯವನ್ನು ಗ್ರಹಿಸುವುದು ಬಹು ಕ್ಲಿಷ್ಟಕರವಾಗಿದೆ, ಏಕೆಂದರೆ ಆ ಗ್ರಂಥಗಳಲ್ಲಿ ಅಡಗಿರುವ ಗಂಭೀರವಾದ ಮತ್ತು ಸಂಕ್ಷಿಪ್ತವಾದ ಗೂಡಾರ್ಥಗಳು ಮಂದ ಬುದ್ಧಿ ಅವರಿಗೆ ಒಂದು ಕಬ್ಬಿಣದ ಕಡಲೆಯಂತಿದೆ.
ಈ ವಾಸ್ತವವನ್ನು ಮನಗಂಡು ಸಾಮಾನ್ಯ ಜನರು ಸಹ ವೇದಾಂತವನ್ನು ಸುಲಭವಾಗಿ ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವಂತೆ ಈ ಅಧ್ಯಾತ್ಮ ದರ್ಶನ ಎಂಬ ಗ್ರಂಥವನ್ನು ಕನ್ನಡದಲ್ಲಿ ರಚಿಸಲಾಗಿದೆ.
ಈ ಗ್ರಂಥದ ಮೂಲ ಉದ್ದೇಶವೇನೆಂದರೆ
1. ವೇದಾಂತದ ಗೂಡಾರ್ಥಗಳನ್ನು ಅತ್ಯಂತ ಸರಳವಾಗಿ ಓದುಗರಿಗೆ ಅರ್ಥವಾಗುವಂತೆ ಮನವರಿಕೆ ಮಾಡಿಕೊಡಲಾಗಿದೆ.
2. ಅಧ್ಯಾತ್ಮ ಜ್ಞಾನದಲ್ಲಿ ಉದ್ಭವಿಸುವ ಅತಿ ಕ್ಲಿಷ್ಟಕರವಾದ ಸಂದೇಹಗಳನ್ನು ಉದಾರಣೆ ಹಾಗೂ ದೃಷ್ಟಾಂತಗಳ ಮೂಲಕ ನಿವಾರಣೆ ಮಾಡುವ ಪ್ರಯತ್ನ ಮಾಡಲಾಗಿದೆ.
3. ಅತ್ಯಂತ ಸೂಕ್ಷ್ಮವಾದ ಆತ್ಮ ವಿಚಾರಗಳನ್ನು ಜನಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವಂತೆ ಗುರು ಶಿಷ್ಯರ ಪ್ರಶ್ನೋತ್ತರ ರೂಪದಲ್ಲಿ ರಚಿಸಲಾಗಿದೆ.
ಈ ಗ್ರಂಥವು ಜಿಜ್ಞಾಸುಗಳಿಗೆ ಯೋಗಿಗಳಿಗೆ ಮತ್ತು ಸಾಧಕರಿಗೆ ಅತ್ಯಂತ ಉಪಯುಕ್ತವಾದ ಮಾರ್ಗದರ್ಶಿ ಆಗಿದೆ.ಜ್ಞಾನ ಸಾಧನೆಗೆ ಬೇಕಾಗಿರುವ ಎಲ್ಲಾ ವಿಷಯ ವಸ್ತುಗಳು ಇದೊಂದೇ ಗ್ರಂಥದಲ್ಲಿ ಲಭ್ಯವಿರುವುದರಿಂದ ಇದು ಸಾಧಕರಿಗೆ ಸಂಪೂರ್ಣ ಕೈಪಿಡಿ ಯಂತಿದೆ.
ಪುಟಗಳು : 374 ಬೆಲೆ :375 (ಪೇಪರ್ ಕವರ್) / 500 (ಕ್ಯಾಲಿಕೋ ಬೈಂಡ್)